ಪ್ರಕಾಶ್ ನಾಯಕ್ ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯವರು. ಓದಿದ್ದು ಇಲೆಕ್ಟ್ರಿಕಲ್ ಇಂಜಿನಿಯರಿಂಗ್. ಉತ್ತರ ಕ್ಯಾಲಿಫೋರ್ನಿಯಾದ ಕುಪರ್ಟಿನೋದಲ್ಲಿ ವಾಸ. ಸಾಂತಾ ಕ್ಲಾರಾದಲ್ಲಿನ ಮಾರ್ವೆಲ್ ಸೆಮಿಕಂಡಕ್ಟರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದಾರೆ. ಅಮೆರಿಕದ ಕನ್ನಡ ಕೂಟ, ಅಕ್ಕ, ಕನ್ನಡ ಸಾಹಿತ್ಯ ರಂಗಗಳ ಪ್ರಕಟಣೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಮೂರ್ತ ಚಿತ್ತ- ಕಥಾಸಂಕಲನ, ಅಂತು – ಕಾದಂಬರಿ ಇವರ ಪ್ರಕಟಿತ ಕೃತಿಗಳು. ಇವರ ಕಥೆಗಳು ಮಯೂರ, ಉದಯವಾಣಿ ಮತ್ತಿತರ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.
Read More
Specifications
Book
Aparichita (Camus’ - The Stranger) - Prakash Nayak, Translator